ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ) ಬೆಳಗಾವಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

wrappixel kit

ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ) ಬೆಳಗಾವಿ

“ಯಾರು ನಿರಂತರ ಕಲಿಸಲು ಬಯಸುವರೋ ಅವರು ಎಂದಿಗೂ ಕಲಿಯುವುದನ್ನು ನಿಲ್ಲಿಸುವುದಿಲ್ಲ” ಎಂಬ ಧ್ಯೇಯದೊಂದಿಗೆ  ಉತ್ತರ ಕರ್ನಾಟಕದ ಐತಿಹಾಸಿಕ ಸಂಸ್ಥೆಯಾಗಿ ಸಿಟಿಇ ಬೆಳಗಾವಿ ನವೋಲ್ಲಾಸದೊಂದಿಗೆ  ಪ್ರಶಿಕ್ಷಕ ಸ್ನೇಹಿಯಾಗಿ, ಕಲಿಕಾರ್ಥಿಗೆ ತತ್ವಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಾರ್ಚ 1939 ರಂದು ಬಾಂಬೆ ಪ್ರಾವಿನ್ಸ ಅಡಿಯಲ್ಲಿ  ಸೆಕೆಂಡರಿ ಟೀಚರ್ಸ ಕಾಲೇಜಾಗಿ (ಎಸ್.ಟಿ ಕಾಲೇಜು)   ಸರದಾರ ಪ್ರೌಢ ಶಾಲೆ ಬೆಳಗಾವಿ ಇಲ್ಲಿ ಆರಂಭಗೊಂಡಿತು.1947ರಲ್ಲಿ ಎಸ್.ಟಿ ಕಾಲೇಜನ್ನು ಪದವಿ ಬೇಸಿಂಗ್ ಟ್ರೇನಿಂಗ್ (ಬಿ.ಟಿ) ಕಾಲೇಜಾಗಿ ಪರಿವರ್ತನೆಗೊಂಡಿತು.1950 ರಲ್ಲಿ ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಯವಾಗಿ ಮರು ನಾಮಕರಣಗೊಂಡಿತು. ಇದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಸಂಲಗ್ನಕ್ಕೆ ಒಳಪಟ್ಟಿತು. 1951ರಲ್ಲಿ ಈಗಿರುವ ಭವ್ಯ ಹಾಗೂ ಪಾರಂಪರಿಕ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಆಗಿನ ಬಾಂಬೆ ಪ್ರಾವಿನ್ಸನ ಮುಖ್ಯ ಮಂತ್ರಿಗಳು  ಹಾಗೂ ಶಿಕ್ಷಣ ಮಂತ್ರಿಗಳಾದ  ಮಾನ್ಯಶ್ರೀ ಬಿ.ಜಿ. ಖೇರ ರವರಿಂದ ಉದ್ಘಾಟಿಸಲ್ಪಟಿತು. ಆಂದು ರಾಂಗಲರ್ ಕಟ್ಟಿ ಇವರು ಪ್ರಾಚಾರ್ಯರಾಗಿದ್ದರು. ಮಾರ್ಚ 1993 ರಂದು ಸರಕಾರಿ ಆದೇಶ ಸಂಖ್ಯೆ: ಇಡಿ 52 ಎಂ.ಎಫ್.ಇ  92 ಬೆಂಗಳೂರು  ದಿನಾಂಕ: 14.7.1992 ರಂದು ಮತ್ತೆ ಮರುನಾಮಕರಣಗೊಂಡು ಸರಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯವಾಗಿ (ಸಿಟಿಇ), ಹಲವು ದಿಕ್ಕಿನೆಡೆಗೆ ವಿವಿಧ ಬಣ್ಣಗಳೊಂದಿಗೆ ಮುನ್ನಡೆಯುತ್ತಿದೆ. 2009 ರಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿಗೆ ಸಂಲಗ್ನಕ್ಕೆ ಒಳಪಟ್ಟಿದೆ.

ಮತ್ತಷ್ಟು ಓದಿ
×
ABOUT DULT ORGANISATIONAL STRUCTURE PROJECTS